ಇದು mangalwedhefamily.com ಎಂಬ ನಾವು ಮಂಗಳವೇಢೆ ಜನ ಎಂಬುದಾಗಿ ತೆರೆದುಕೊಳ್ಳುವ ಒಂದು ಜಾಲತಾಣ.

ಒಂದು ಸಂತಸ, ಸಂಭ್ರಮದೊಂದಿಗೆ ಈ ಜಾಲತಾಣವನ್ನು ಇಂದು - ಶುಕ್ರವಾರ, ದುರ್ಮುಖ ನಾಮ ಸಂವತ್ಸರದ ಭಾದ್ರಪದ ಶುಕ್ಲ ಅಷ್ಟಮಿಯ ದಿನ ಅಂದರೆ ೯ ಸೆಪ್ಟೆಂಬರ ೨೦೧೬ ರಂದು launch ಮಾಡುತ್ತಿದ್ದೇನೆ.

ಈ ಕೆಲಸ ಒಂದು ದಶಕಕ್ಕೂ ಮುಂಚೆಯೆ ಆಗಬೇಕಿತ್ತು, ೨೦೦೪ ನೆ ಇಸವಿಯಲ್ಲಿ. ಅದು ನನ್ನ ತಂದೆ- ದಿ.ರಂಗನಾಥ ಕೃಷ್ಣ ಮಂಗಳವೇಢೆಯವರ ಜನ್ಮ ಶತಮಾನದ ವರ್ಷ.

ನಮ್ಮ ಮನೆತನದ ಇತಿಹಾಸವನ್ನು ಕಾಲಗರ್ಭವನ್ನು ಕೆದಕಿ ಹೊರತರುವ ಮತ್ತು ವಂಶಾವಳಿಯ ಒಂದು ಚಿತ್ರವನ್ನು ಕೊಡುವ ಈ ಕನಸು ಸುಮಾರು ೨೫ ವರ್ಷಗಳ ಹಿಂದೆಯೆ ಮನದಲ್ಲಿ ಮೊಳಕೆಯೊಡೆದಿತ್ತು. ಅದು ಇಂದು ನನಸಾಗುತ್ತಿದೆ. ಆಶೆ ಏನಿದ್ದರೂ, ಪ್ರಯತ್ನ ಮಂದಗತಿಯಲ್ಲಿ ಸಾಗಿದ್ದಿತು, ಸಕಾರಣವಾಗಿಯೆ ಆದರೂ.

ಹೀಗಾಗಿ, ಶತಮಾನವರ್ಷದಾನಂತರದ ಒಂದನೆಯದು ಹೋಗಲಿ, ಇದು ಹನ್ನೆರಡನೆಯ ಈ ವರ್ಷ, ೨೦೧೬ನೆ ಇಸವಿಯ ಈ ದಿನ. ಇರಲಿ. ಯಾವುದಕ್ಕೂ ಕಾಲ ಕೂಡಿ ಬರಬೇಕು. ಅಲ್ಲವೆ! ...ಮುಂದೆ ಓದಿ