ಎರಡನೆಯ ಟಿಸಿಲು

ಗೋವಿಂದ ಭಟ್ಟರಿಂದ ಬೆಳೆದ ಟಿಸಿಲು / ದಾಮೂ ಆಚಾರ್ಯರು ಇದ್ದ ಟಿಸಿಲು

ಮೂಲ ಪುರುಷ – ಮಾಣಿಕ ಭಟ್ಟ

ಎರಡನೆಯ ತಲೆಮಾರು
ಮಾಣಿಕ ಭಟ್ಟರ ಮೂವರು ಪುತ್ರರು – ೧) ಬಾಳಂ ಭಟ್ಟ ೨) ಗೋವಿಂದ ಭಟ್ಟ ೩) ಅನಂತಾಚಾರ್ಯ
ಇದು ಎರಡನೆ ಟಿಸಿಲಿನ ಅಂದರೆ ಗೋವಿಂದ ಭಟ್ಟರಿಂದ ಚಿಗುರಿದ, ಬೆಳೆದ ಸಂತಾನದ ತಲೆಮಾರುಗಳ ಪ್ರತ್ಯೇಕ ಯಾದಿಯಾದುದರಿಂದ – ಇಲ್ಲಿ ಗೋವಿಂದ ಭಟ್ಟರ ಹೆಸರನ್ನು ಮಾತ್ರ ಉಳಿಸಿಕೊಂಡು ಮುಂದುವರೆಯಲಾಗಿದೆ.

ಮೂರನೆ ತಲೆಮಾರು
ಗೋವಿಂದಭಟ್ಟರ ಏಕ ಮಾತ್ರ ಪುತ್ರ ವಾಸುದೇವಾಚಾರ್ಯ

  • ಗೋವಿಂದ ಭಟ್ಟ
    • ವಾಸುದೇವಾಚಾರ್ಯ

ನಾಕನೆ ತಲೆಮಾರು
ವಾಸುದೇವಾಚಾರ್ಯರ ಮೂವರು ಪುತ್ರರು : ೧) ವೆಂಕಟಾಚಾರ್ಯ ೨) ಕಾಂತಾಚಾರ್ಯ ೩) ಬಿಂದುಮಾಧವಾಚಾರ್ಯ

  • ವಾಸುದೇವಾಚಾರ್ಯ
    • ವೆಂಕಟಾಚಾರ್ಯ
    • ಕಾಂತಾಚಾರ್ಯ
    • ಬಿಂದುಮಾಧವಾಚಾರ್ಯ

ನನ್ನ ಟಿಪ್ಪಣಿ :ವೆಂಕಟಾಚಾರ್ಯರ ಹೆಸರನ್ನು ವಂಶಾವಳಿಯಲ್ಲಿ ವೆಂಕಪ್ಪಾಚಾರ್ಯರೆಂದು ಬರೆಯಲಾಗಿದ್ದು ಕೆಳಗೆ ಕಂಸಿನಲ್ಲಿ ಮುರಗೋಡ ಜಮೀನ ಸಂಪಾದಕ ವೆಂಕ ಎಂದು ಸೇರಿಸಲಾಗಿದೆ. ಮತ್ತೆ ಕೆಲ ಕಾಗದಗಳಲ್ಲಿ ಇವರ ಹೆಸರನ್ನು ವೆಂಕಣ್ಣಾಚಾರ್ಯ / ವೇಣಾಚಾರ್ಯ ಎಂದೂ ಬರೆಯಲಾಗಿದೆ.

ಐದನೆ ತಲೆಮಾರು
ವೆಂಕಟಾಚಾರ್ಯರ ಮೂವರು ಪುತ್ರರು : ೧. ಭಾವು ಆಚಾರ್ಯ ೨.ಗೋಪಾಲಾಚಾರ್ಯ ೩.ಗುರಾಚಾರ್ಯ ಮತ್ತು ಕಾಂತಾಚಾರ್ಯರ ಒಬ್ಬ ಮಗ (ದತ್ತಕ ಪುತ್ರ) – ವಿಟ್ಠಲಾಚಾರ್ಯ (ಜನಕ ತಂದೆ – ಭಾವು ಆಚಾರ್ಯರು. ಅವರ ಎರಡನೆ ಮಗ)

  • ವೆಂಕಟಾಚಾರ್ಯ
    • ಭಾವು ಆಚಾರ್ಯ
    • ಗೋಪಾಲಾಚಾರ್ಯ
    • ಗುರಾಚಾರ್ಯ
  • ಕಾಂತಾಚಾರ್ಯ
    • ವಿಟ್ಠಲಾಚಾರ್ಯ
      ದತ್ತಕ ಪುತ್ರ
  • ಬಿಂದುಮಾಧವಾಚಾರ್ಯ
    • ??

ಆರನೆ ತಲೆಮಾರು
ಭಾವು ಆಚಾರ್ಯರ ಮೂವರು ಮಕ್ಕಳು : ೧. ಭೀಮಾಚಾರ್ಯ ೨. ವಿಟ್ಠಲಾಚಾರ್ಯ ೩. ಬಾಳಕೃಷ್ಣಾಚಾರ್ಯ ; ಗೋಪಾಳಾಚಾರ್ಯರ ಇಬ್ಬರು ಮಕ್ಕಳು : ೧. ವರದಾಚಾರ್ಯ ೨. ಶೇಷಾಚಾರ್ಯ

  • ಭಾವು ಆಚಾರ್ಯ
    • ಭೀಮಾಚಾರ್ಯ
    • ವಿಟ್ಠಲಾಚಾರ್ಯ
    • ಬಾಳಕೃಷ್ಣಾಚಾರ್ಯ
  • ಗೋಪಾಳಾಚಾರ್ಯ
    • ವರದಾಚಾರ್ಯ
    • ಶೇಷಾಚಾರ್ಯ
  • ವಿಟ್ಠಲಾಚಾರ್ಯ
    • ??

ನನ್ನ ಟಿಪ್ಪಣಿ: ಗುರಾಚಾರ್ಯರು ಪರಗೋತ್ರಕ್ಕೆ ದತ್ತಕ ಹೋಗಿದ್ದರಿಂದ ದತ್ತಕ ತಂದೆ ಮತ್ತು ಹೊಸ ಅಡ್ಡಹೆಸರು ಹಾಗೆಯೆ ಅವರ ಸಂತಾನದ ಕುರಿತು ವಂಶಾವಳಿಯಲ್ಲಿ ದಾಖಲೆ ಇಲ್ಲ. ವಿಟ್ಠಲಾಚಾರ್ಯರೂ ದತ್ತಕ ಹೋದರು. ಆದರೆ ಪರಗೋತ್ರಕ್ಕೆ ಅಲ್ಲ. ತಮ್ಮ ಅಜ್ಜ ವೆಂಕಟಾಚಾರ್ಯರ ಬೆನ್ನ ಮೇಲಿನ ತಮ್ಮ ಕಾಂತಾಚಾರ್ಯರಿಗೆ ದತ್ತಕ ಪುತ್ರನಾದರು. ಹೀಗಾಗಿ ಆರನೆ ತಲೆಮಾರಿನಲ್ಲಿ ಹುಟ್ಟಿದ್ದವರಾದರೂ, ವಂಶಾವಳಿ ಚಾರ್ಟಿನಲ್ಲಿ ಐದನೆ ತಲೆಮಾರಿನವರಾದ ತಮ್ಮ ತಂದೆ ಬಾವೂ ಆಚಾರ್ಯರ ಸಾಲಿನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಬಹುಶಃ ನಿಪುತ್ರಕರಾಗಿದ್ದರಿಂದ ಅವರ ಹೆಸರಿನ ಕೆಳಗೆ ಮತ್ತಾವ ಹೆಸರೂ ಇಲ್ಲ. ಆದರೆ ನಿಪುತ್ರಕರೆಂದು ಸೂಚಿಸುವ ಚಿಹ್ನೆಯೂ ಇಲ್ಲ.

ಏಳನೆ ತಲೆಮಾರು
ಭೀಮಾಚಾರ್ಯರ ಮೂವರು ಪುತ್ರರು : ೧. ಅಣ್ಣಾಚಾರ್ಯ ೨. ಪಾಂಡುರಂಗಾಚಾರ್ಯ ೩. ಗುರಾಚಾರ್ಯ ; (ವಿಟ್ಠಲಾಚಾರ್ಯರು ನಾಕನೆ ತಲೆಮಾರಿನ ಕಾಂತಾಚಾರ್ಯರಿಗೆ ದತ್ತಕ ಹೋದರು. ಅವರಿಗೆ ಮಕ್ಕಳಾದ ಸೂಚನೆಗಳಿಲ್ಲ, ನಿಪುತ್ರಕರೆಂಬ ಚಿಹ್ನೆಯೂ ಅವರ ಹೆಸರಿನ ಕೆಳಗೆ ಇಲ್ಲ. ಆದ್ದರಿಂದ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿದ್ದೇನೆ.) ಬಾಳಕೃಷ್ಣಾಚಾರ್ಯರ ಇಬ್ಬರು ಪುತ್ರರು : ೧. ಹಣಮಂತಾಚಾರ್ಯ ೨. ಭೀಮಾಚಾರ್ಯ ; ವರದಾಚಾರ್ಯರ ಇಬ್ಬರು ಪುತ್ರರು: ೧. ವಾಸುದೇವಾಚಾರ್ಯ ೩. ಶೇತು ಆಚಾರ್ಯ ; ಶೇಷಾಚಾರ್ಯರ ಮೂವರು ಗಂಡು ಮಕ್ಕಳು ಮತ್ತು ಒಬ್ಬ ಪುತ್ರಿ : ೧. ರಂಗಾಚಾರ್ಯ ೨. ನಾಗೂಬಾಯಿ ೩. ದಾಮೂಆಚಾರ್ಯ ೪.ವೆಂಕಟಾಚಾರ್ಯ

  • ಭೀಮಾಚಾರ್ಯ
    • ಅಣ್ಣಾಚಾರ್ಯ
    • ಪಾಂಡುರಂಗಾಚಾರ್ಯ
    • ಗುರಾಚಾರ್ಯ
  • ಬಾಳಕೃಷ್ಣಾಚಾರ್ಯ
    • ಹಣಮಂತಾಚಾರ್ಯ
    • ಭೀಮಾಚಾರ್ಯ
  • ವರದಾಚಾರ್ಯ
    • ವಾಸುದೇವಾಚಾರ್ಯ
    • ಶೇತು ಆಚಾರ್ಯ
  • ಶೇಷಾಚಾರ್ಯ
    • ರಂಗಾಚಾರ್ಯ
    • ನಾಗೂಬಾಯಿ
    • ದಾಮೂಆಚಾರ್ಯ
    • ವೆಂಕಟಾಚಾರ್ಯ

ನನ್ನ ಟಿಪ್ಪಣಿ: ಶೇಷಾಚಾರ್ಯರ ಈ ನಾಕು ಮಕ್ಕಳಲ್ಲಿ ಮೊದಲ ಸಲ ಒಬ್ಬ ಪುತ್ರಿಯ ಹೆಸರೂ – ನಾಗೂಬಾಯಿ – ದಾಖಲಾಗುತ್ತಿದೆ. ವಂಶಾವಳಿಯ ಚಾರ್ಟಿನಲ್ಲಿ ಇಲ್ಲಿಯ ವರೆಗೆ ಪುತ್ರ ರತ್ನಗಳಿಗೆ ಮಾತ್ರ ಸ್ಥಾನ ಇದ್ದಿತೇ ಹೊರತು ಯಾವುದೇ ಕನ್ಯಾ ರತ್ನ, ಸ್ತ್ರೀ ಸಂತಾನದ ಹೆಸರು ಈ ತಲೆಮಾರಿನ ವರೆಗೆ ಕಾಣಿಸಿಕೊಂಡಿಲ್ಲ. ಬೇರೆ ಮೂಲಗಳಿಂದ ನನಗೆ ಗೊತ್ತಾದ ಈ ಹೆಸರನ್ನು ದಾಖಲಿಸಿದ್ದೇನೆ. ಮುಂದಿನ ತಲೆಮಾರುಗಳ ವ್ಯಕ್ತಿಗಳನ್ನು ದಾಖಲಿಸುವಾಗ ಗೊತ್ತಿರುವ ಹೆಣ್ಣು ಮಕ್ಕಳ ಸಹಿತ ಎಲ್ಲರ ಹೆಸರುಗಳನ್ನು ದಾಖಲಿಸಲಾಗುವದು. ಇಲ್ಲಿಯ ವರೆಗೆ ಬಂದಿರುವ ವ್ಯಕ್ತಿಗಳಲ್ಲಿ ಕೆಲವರನ್ನು ನಿಪುತ್ರಕರೆಂದು ತೋರಿಸಲಾಗಿದೆ, ಕೆಲವೊಮ್ಮೆ ಅವರಿಗೆ ಹೆಣ್ಣು ಮಕ್ಕಳಿದ್ದಾಗಲೂ. ಆದರೆ ಅವರು ಸಂತಾನಹೀನರೇನೂ ಅಲ್ಲ. ಆದರೆ ಹಾಗೆ ಬಾಸವಾಗುತ್ತದೆಯಷ್ಟೆ!

ಎಂಟನೆ ತಲೆಮಾರು
ಅಣ್ಣಾಚಾರ್ಯರಿಗೆ ಮಕ್ಕಳಾಗಿದ್ದವೊ ಇಲ್ಲವೊ – ಆ ಸೂಚನೆ ವಂಶಾವಳಿ ಚಾರ್ಟಿನಲ್ಲಿ ಇಲ್ಲ. ಅದಕ್ಕೆಂದೆ ಅವರ ಹೆಸರಿನ ಕೆಳಗೆ ನಾನು ಪ್ರಶ್ನಾರ್ಥಕ ಚಿಹ್ನೆಯನ್ನಿರಿಸಿದ್ದೇನೆ. ವಿಷಯ ಸಂಗ್ರಹಕ್ಕಾಗಿ ನಾನು ನಂತರದ ತಲೆಮಾರುಗಳ ಅನೇಕರನ್ನು ಭೆಟ್ಟಿಯಾಗಿದ್ದರೂ ಅವರಿಂದ ಈ ಬಗ್ಗೆ ಯಾವುದೆ ಸುಳಿಹು ಸಿಕ್ಕಿಲ್ಲ.

ಪಾಂಡುರಂಗಾಚಾರ್ಯರಿಗೆ ಇಬ್ಬರು ಪುತ್ರರು : ೧. ಗೋವಿಂದಾಚಾರ್ಯ ೨. ರಾಘವೇಂದ್ರಾಚಾರ್ಯ

ಗುರಾಚಾರ್ಯರು ಪರಗೋತ್ರಕ್ಕೆ ದತ್ತಕ ಹೋಗಿದ್ದ ಮಾಹಿತಿ ಇದೆ. ಬಹುಶ: ಈ ಕಾರಣದಿಂದ ವಂಶಾವಳಿಯಲ್ಲಿ ಅವರ ಸಂತಾನದ ಹೆಸರುಗಳನ್ನು ಬರೆದಿಲ್ಲ. ಹಾಗೆಯೆ ಅವರು ಯಾರಿಗೆ ದತ್ತಕ ಹೋದರು ಎಂಬುದೂ ಬರೆಯಲ್ಪಟ್ಟಿಲ್ಲ.

ಹಣಮಂತಾಚಾರ್ಯ ಮತ್ತು ಭೀಮಾಚಾರ್ಯರಿಗೆ ಸಂತಾನವಿದ್ದಿತೊ ಇಲ್ಲವೊ ವಂಶಾವಳಿಯಿಂದ ತಿಳಿಯದು. ಹೀಗಾಗಿ ಅವರ ಹೆಸರ ಕೆಳಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿದ್ದೇನೆ.

ವಾಸುದೇವಾಚಾರ್ಯರು ನಿಪುತ್ರಕರಾಗಿದ್ದರು. ಅದನ್ನು ಸೂಚಿಸುವ ಚಿಹ್ನೆಯನ್ನು ಹಾಕಿದ್ದೇನೆ. ಅವರಿಗೆ ಹೆಣ್ಣು ಮಕ್ಕಳಾದರೂ ಇದ್ದರೊ ಗೊತ್ತಿಲ್ಲ.

ಶೇತು ಆಚಾರ್ಯರಿಗೆ ಪುತ್ರ ಪ್ರಾಪ್ತಿ ಆಗಿರಲಿಲ್ಲವೆಂದು ತಮ್ಮ ಕಕ್ಕ ಶೇಷಾಚಾರ್ಯರ ಮಗ – ವಾವೆಯಲ್ಲಿ ತಮ್ಮನಾದ ದಾಮೂಆಚಾರ್ಯರನ್ನು ದತ್ತಕ ತೆಗೆದುಕೊಂದಿದ್ದರು.

ರಂಗಾಚಾರ್ಯರಿಗೆ ಪುತ್ರ ಪ್ರಾಪ್ತಿ ಆಗಿರಲಿಲ್ಲ.

ಅವರ ತಂಗಿ ನಾಗೂಬಾಯಿಯನ್ನು ಬೆಳಗಾವಿಯ ಟಿಳಕ ಚೌಕದಲ್ಲಿ ಇರುತ್ತಿದ್ದ ಬಾಬಾ ಕಟ್ಟಿಯವರ ತಂದೆ ಶ್ಯಾಮಾಚಾರ್ಯರಿಗೆ ಕೊಟ್ಟಿದ್ದಿತೆಂದು (ಬಹುಶಃ) ಸುಧೀರ ಅವರಿಂದ ಕೇಳಿದ ನೆನಪು. ಅವರ ಮನೆತನದವರು ಇನ್ನೂ ಅಲ್ಲಿಯೆ ಇರುತ್ತಿದ್ದಾರೆ. ಅವರಿಂದ ಕೇಳಿ ಖಾತರಿ ಮಾಡಿಕೊಳ್ಳ ಬೇಕಿದೆ.

ದಾಮೂ ಆಚಾರ್ಯರು ತಮ್ಮ ದೊಡ್ಡಪ್ಪ – ಶೇಷಾಚಾರ್ಯರ ಅಣ್ಣ ವರದಾಚಾರ್ಯ- ಅವರ ದ್ವಿತೀಯ ಪುತ್ರ ಶೇತು ಆಚಾರ್ಯರಿಗೆ ದತ್ತಕ ಹೋದರು. (ಹೀಗಾಗಿ ಏಳನೆ ತಲೆಮಾರಿನವರಾದರೂ – ಚಾರ್ಟಿನಲ್ಲಿ ಎಂಟನೆ ತಲೆಮಾರಿನವರ ಸಾಲಿನಲ್ಲಿಯೂ ಕಾಣಿಸುತ್ತಾರೆ).

ದಾಮೂಆಚಾರ್ಯರಿಗೆ ಆರುಜನ (೫ ಗಂಡು + ೧ ಹೆಣ್ಣು) ಮಕ್ಕಳು : ೧. ಸೇತುರಾಮಾಚಾರ್ಯ ಉರ್ಫ ಗುಂಡಾಚಾರ್ಯ ೨. ವಸಂತ ಮಾಧವ (ಕೊಣ್ಣೂರ ಎಂಬ ಅಡ್ಡಹೆಸರಿನ ಮನೆತನಕ್ಕೆ ದತ್ತಕ ಹೋದರು) ೩. ಮೋಹನ ೪. ಶ್ಯಾಮ ೫. ಕಮಲಾ (ಘನಶ್ಯಾಮ ಬೆಳಗಾವಕರರ ಪತ್ನಿ) ೬. ಸುಧೀರ
ವೆಂಕಟಾಚಾರ್ಯರಿಗೆ ಎಂಟು ಮಕ್ಕಳು (೫ ಗಂಡು + ೩ ಹೆಣ್ಣು) : ೧. ರಂಗಾಚಾರ್ಯ ೨. ಗಂಗೂತಾಯಿ ೩. ಶ್ರೀನಿವಾಸ ೪. ಗೋದಾವರಿ ೫. ವಿಟ್ಠಲ ೬. ಗುರುರಾಜ ೭.ಗೋಪಾಲ ೮.ನಲಿನಿ

  • ಅಣ್ಣಾಚಾರ್ಯ
    • ??
  • ಪಾಂಡುರಂಗಾಚಾರ್ಯ
    • ಗೋವಿಂದಾಚಾರ್ಯ
    • ರಾಘವೇಂದ್ರಾಚಾರ್ಯ
  • ಹಣಮಂತಾಚಾರ್ಯ
    • ??
  • ಭೀಮಾಚಾರ್ಯ
    • ??
  • ವಾಸುದೇವಾಚಾರ್ಯ
    • O
  • ಶೇತು ಆಚಾರ್ಯ
    • ದಾಮೂ ಆಚಾರ್ಯ
      (ದತ್ತಕ ಪುತ್ರ)
  • ರಂಗಾಚಾರ್ಯ
    • O
  • ದಾಮೂ ಆಚಾರ್ಯ (ದತ್ತಕ ಹೋದರು)
    • ಸೇತುರಾಮಾಚಾರ್ಯ
    • ವಸಂತ ಮಾಧವ
      (ಪರ ಗೋತ್ರಕ್ಕೆದತ್ತಕ)
    • ಮೋಹನ
    • ಶ್ಯಾಮ
    • ಕಮಲಾ
      (ಪರ ಗೋತ್ರಕ್ಕೆದತ್ತಕ)
    • ಸುಧೀರ
  • ವೆಂಕಟಾಚಾರ್ಯ
    • ರಂಗಾಚಾರ್ಯ
    • ಗಂಗೂತಾಯಿ
    • ಶ್ರೀನಿವಾಸ
    • ಗೋದಾವರಿ
    • ವಿಟ್ಠಲ
    • ಗುರುರಾಜ
    • ಗೋಪಾಲ
    • ನಲಿನಿ