ಗೋವಿಂದಭಟ್ಟರ ಕಾಲದ ಭೂದಾನ ಪತ್ರ ೧

ಮೋಡಿಯಲ್ಲಿ ಬರೆದ ಹಳೆ ಕಾಗದಗಳು – ೧  (ಗೋವಿಂದಭಟ್ಟರ ಹೆಸರಿನಲ್ಲಿನದು)

(ಭೂ?) ದಾನ ಪತ್ರ – ಶಕೆ ೧೬೮೪, ಚಿತ್ರಭಾನು ಸಂವತ್ಸರ, ಫಾಲ್ಗುಣ ವದ್ಯ (ಕೃಷ್ಣ ಪಕ್ಷ) ತ್ರಯೋದಶಿ, ಮಂದವಾಸರ (ಶನಿವಾರ) ದಿನದಂದು ಬರೆದುಕೊಟ್ಟ ಕಾಗದ (ನಕಲು ಪ್ರತಿ).  ಕ್ರಿಸ್ತ ಶಕದಲ್ಲಿ ಈ ದಿನಾಂಕದ ಪರಿವರ್ತನೆ : ಶಕೆ ೧೬೮೪ + ೭೮ =  ಕ್ರಿ.ಶ. ೧೭೬೨. ಆದರೆ ಫಾಲ್ಗುಣ ಮಾಸವು ಸಂವತ್ಸರದ ಕೊನೆಯ ತಿಂಗಳು ಮತ್ತು ಅದು ಬರುವಾಗ ಮುಂದಿನ ಕ್ರಿಸ್ತ ಶಕ ಇಸವಿ ಬಂದಿರುತ್ತದೆ. ಹೀಗಾಗಿ ಈ ಕಾಗದವನ್ನು ಬರೆದ ವರ್ಷ  ಕ್ರಿ.ಶ.೧೭೬೩ (ಎಪ್ರಿಲ ತಿಂಗಳು).

ಲಿಪ್ಯಂತರ
oldest_doc_1

श्री
नमस्तुंगि सिरस्तुंगि छेत्र चामरवे त्रैलोक्य
नगरारंभ मुलस्तम्भाये शांभवे ॥विष्णुशक्तीस
मुत्पन्ने शंखवर्ण महितले आनेक रत्न संभुते भु
मिदेवि नमोस्तुते स्वस्ति श्री जयाभ्युदये श्री म
नृप शालिवाहन शके १६७४ चित्रभानुनाम संव
त्सरे फालगुण वदि त्रयोदशि मंदवासरे ॥ वॆदशा
स्त्र संपन्न राजमान्ये राजेश्री गोविंदभट पितामा
णिकभट गोत्र कास्यप सुत्र अस्वलायन जोतिसि
मंगळवेढे सांप्रत वास्तव्य मुरगोड स्वामिचे शेवे
सि

कृष्णाबायि व नीलकंठराव सिंधे साहेब सुभा दंडवत
सुहूर सन सलास सितैन मया व अलफे लिहुन दिले भूदान पत्र असेजे

ಪ್ರಾರಂಭದಲ್ಲಿ ದೇವನಾಗರಿಯಲ್ಲಿ ಬರೆದ ಶ್ಲೋಕ ಮತ್ತು ಕಾಗದವನ್ನು ಬರೆದ  ಶಕೆ, ಸಂವತ್ಸರ,  ಮಾಸ, ಪಕ್ಷ, ತಿಥಿ ಮತ್ತು ಯಾರ ಹೆಸರಿನಲ್ಲಿ ಮಾಡಿಕೊಟ್ಟ ಕಾಗದ  ವಿವರಗಳು ಇವೆ. ಮುಂದಿನ ಎರಡು ಸಾಲುಗಳಲ್ಲಿನವು ಮೋಡಿಯಲ್ಲಿ ಲಿಖಿತವಾದವು. ಆಲ್ಲಿಗೆ ಉದ್ದವಾಗಿದ್ದ ಆ ಕಾಗದ ಅರ್ಧಕ್ಕೆ ಕತ್ತರಿಸಿ ಹೋಗಿದ್ದು,  ಉತ್ತರಾರ್ಧ  ಸಿಗದೆ ಹೋಗಿ  ಅದರಲ್ಲಿನ ಮಾಹಿತಿ ಅಷ್ಟರಮಟ್ಟಿಗೆ ಅಪೂರ್ಣವಾಗಿದೆ.  ಮೋಡಿಯಲ್ಲಿನ ಆ ಎರಡು ಸಾಲುಗಳು:


ನನ್ನ ಟಿಪ್ಪಣಿಗಳು
ಈ ಲಿಪ್ಯಂತರವನ್ನು ೧೪-೧೦-೨೦೧೬ ರಂದು ಮಾಡಿಕೊಟ್ಟ ಡಾ. ಸಾವಂತ ಅವರಿಂದ ಕೇಳಿತಿಳಿದ, ಪ್ರಸ್ತುತ ದಾಖಲೆಯಲ್ಲಿ ಉಲ್ಲಿಖಿತವಾಗಿರುವ ಕೆಲವು ಅರೆಬಿಕ್ ಸಂಖ್ಯಾವಾಚಕ,ಇಸವಿ ಮತ್ತು ತಾರೀಖು ನಿರ್ದೇಶಕ ಶಬ್ದಗಳ ಜಂತ್ರಿ :
ಇಹಿದೆ – ೧ ;   ಇಸನೆ – ೨ ;    ಸಲಾಸ – ೩ ;   ಅರಬಾ (ಅರ್ಬಾ) – ೪ ;   ಖಮಸ – ೫ ;   ಸೀತ್ – ೬ ;   ಸಬ್ಬಾ – ೭; ಸಮಾನ್ – ೮ ;     ಟಿಸ್ಸಾ – ೯ ; ಅಶೇರ – ೧೦ ;   ಮಯಾ – ೧೦೦ ;   ಅಲಫೆ – ೧೦೦೦

(ಉರ್ದು /  ಪರ್ಸಿಅಯನ್ ಲಿಪಿಯನ್ನು ಬಲಗಡೆಯಿಂದ ಎಡಗಡೆ ಓದಬೇಕು) ಮತ್ತು   ಅರೆಬಿಕ್ / ಹಿಜರಿ  ವರ್ಷ- ಇಸವಿಗಳನ್ನು ಕ್ರಿಸ್ತ ಶಕ ಇಸವಿಗೆ ಹೊಂದಿಸಲು,  ಆ ಸಂಖ್ಯೆಗೆ ೬೦೦ನ್ನು ಕೂಡಿಸಬೇಕು.

ಈ  ದಾನಪತ್ರದಲ್ಲಿ ಹೇಳಲಾದ ಸಂಖ್ಯೆಗಳು : ಅಲಫೆ  – ೧೦೦೦ +  ಮಯಾ – ೧೦೦ + ಸಿತೈನ – ೬೦ +  ಸಲಾಸ – ೩ =  ೧೧೬೩ ಈ ಸಂಖ್ಯೆಗೆ + ೬೦೦ (ಕೂಡಿಸಿದಾಗ)  =  ಕ್ರಿ.ಶ. ೧೭೬೩ ನೆ ಇಸವಿ.

ಮತ್ತೂ ಕೆಲವು, ಪೇಶವೆ  ಕಾಲದಲ್ಲಿ ಬಳಕೆಯಲ್ಲಿದ್ದ ಶಬ್ದಗಳು:
ಸುಭಾ – ಜಿಲ್ಲೆ  ; ಪರಗಣಾ – ತಾಲೂಕು ; ಮೌಜೆ – ಗ್ರಾಮ ; ಮದರೆ – ಕೆಲವೆ ಮನೆಗಳಿದ್ದ ಅತಿ ಚಿಕ್ಕ ಗ್ರಾಮ