ಗೋವಿಂದ

ಪತ್ರ – Post Card

  • ಜನಕ ತಂದೆ ರಾಮಾಚಾರ್ಯರು ತಮಗೆ ಪುತ್ರೋತ್ಸವ ಆದುದನ್ನು ತಿಳಿಸಿ ಕಿತ್ತೂರಿನ ಕೃಷ್ಟಾಚಾರ್ಯರಿಗೆ ಬರೆದ ಪತ್ರ. ಕಾಲಾಂತರದಲ್ಲಿ ಈ ಕೃಷ್ಟಾಚಾರ್ಯರೇ ಆ ಹುಡುಗನನ್ನು ದತ್ತಕ ತೆಗೆದುಕೊಂಡುದುದು ಒಂದು ವಿಶೇಷ.

 

ಇತರ ಕಾಗದ ಪತ್ರಗಳು

  • ಜನಕ ತಂದೆ ರಾಮಾಚಾರ್ಯರು ತಮ್ಮ ಮೊದಲ ಮೂರು ಮಕ್ಕಳ ಜನ್ಮ ಟಿಪ್ಪಣಿಗಳನ್ನು ಸ್ವ-ಹಸ್ತಾಕ್ಷರದಲ್ಲಿ (?) ಬರೆದ ಕಾಗದ. 

  • ಯರಝರ್ವಿಯವರ ಡೈರಿ (ರೆಜಿಸ್ಟರ)ದಲ್ಲಿ ನಮೂದಿಸಿದ ಜನ್ಮ ತಾರೀಖಿಗೆ ಸಂಬಂಧಿಸಿದ ಉಲ್ಲೇಖ. 

  • ರಂಗನಾಥ  ಅವರೆ ತಮ್ಮ ಸ್ವ-ಹಸ್ತಾಕ್ಷರದಲ್ಲಿ ಬರೆದಿಟ್ಟಿದ್ದ ತಮ್ಮ ಜನ್ಮ ಟಿಪ್ಪಣಿ (೧೯೪೬ ರ ಡೈರಿ).

  • ಧಾರವಾಡದ ಕರ್ನಾಟಕ ಹಾಯಸ್ಕೂಲಿನ ಜನರಲ್ ರಜಿಸ್ಟರದಲ್ಲಿ ನಮೂದಾದ  ಪ್ರವೇಶ ಹಾಗೂ ಜನ್ಮ ತಾರೀಖಿನ ದಾಖಲು. 

  • ರಂಗನಾಥ ಮತ್ತು ಅವರ ಬೆನ್ನ ಮೇಲಿನ ತಮ್ಮ ಗೋವಿಂದ ಇವರ ಮುಂಜಿವೆ – ತಾ: ೨೨-೦೫-೧೯೧೩. ಯರಝರ್ವಿಯವರ ಡೈರಿ.

 

  • ರಂಗನಾಥ ಅವರ Vernacular Final Examination Certificate. 

ಆಗಿನ ಪ್ರಾಥಮಿಕ ಶಿಕ್ಷಣ – ೭ನೆ ಇಯತ್ತೆಯ ಕೊನೆಯಲ್ಲಿ ಮುಲಕಿ ಪರೀಕ್ಷೆಯಲ್ಲಿ ಕೊನೆಗೊಳ್ಳುತ್ತಿದ್ದಿತು. ಆದರೆ, ಹಾಗೆ ಕಲಿಯುತ್ತಿದ್ದ ವಿದ್ಯಾರ್ಥಿಗಳು ವರ್ನ್ಯಾಕ್ಯುಲರ ಸ್ಕೂಲಿನವರಾಗಿದ್ದರೆ, ಆ ಏಳು ವರ್ಷಾವಧಿಯಲ್ಲಿ ಅವರಿಗೆ ಇಂಗ್ಲೀಷ ಭಾಷೆಯನ್ನು ಕಲಿಸುತ್ತಿರಲಿಲ್ಲ. ಅವರು ಮಾಧ್ಯಮಿಕ ಶಾಲೆಯನ್ನು (ಹಾಯ್ ಸ್ಕೂಲ) ಪ್ರವೇಶ ಪಡೆಯ ಬಯಸಿದರೆ ಆ ಮುನ್ನ ಒಂದು ವರ್ಷ ಇಂಗ್ಲೀಷ ಕಲಿಯ ಬೇಕಾಗಿತ್ತು-  ೪, ೫, ೬ನೆ ವರ್ಗದಲ್ಲಿ ಆ ಭಾಷೆಯನ್ನು ಕಲಿತವರು ಯಾವ ಮಟ್ಟಕ್ಕೆ ಬಂದಿರುತ್ತಿದ್ದರೊ ಆ ಮಟ್ಟಕ್ಕೆ ಬರಲು. ಇಲ್ಲಿ, ತಿಳಿದುಕೊಳ್ಲಬೇಕಾದುದು ಇಷ್ಟೆ. ರಂಗನಾಥ ಅವರು ಹೀಗೇ ಮಾಡಿ, ಅಂದರೆ ಒಂದು ವರ್ಷ ಇಂಗ್ಲೀಷಿಗಾಗಿಯೆ ಕಳೆದುಕೊಂಡು, ಎಸ್.ಎಸ್.ಸಿ. ಆಗಿದ್ದರೆ?

 

  •  ಧಾರವಾಡದ ಕರ್ನಾಟಕ ಹಾಯಸ್ಕೂಲಿನ ಫೀ ರಸೀದಿ (ತಾ: ೨೪-೯-೧೯೨೪).  ಆಗ ಅವರು ೬ನೇ ತರಗತಿಯಲ್ಲಿ (ಅಂದರೆ ಈಗಿನ ೧೦ನೇ ತರಗತಿ) ಕಲಿಯುತ್ತಿದ್ದರು. 

ಆ ದಿನಗಳಲ್ಲಿ ಪ್ರಾಥಮಿಕ ೪ನೇ ಇಯತ್ತೆ ಮುಗಿಸಿದ ಮೇಲೆ ಮಾಧ್ಯಮಿಕ ಶಾಲೆಗೆ ಪ್ರವೇಶ ಸಿಗುತ್ತಿತ್ತು. ಅದು ಮಾಧ್ಯಮಿಕ ಶಾಲೆಯ ೧ನೇ ತರಗತಿ. ಹೀಗಾಗಿ ೬ನೆ ತರಗತಿಯಂದರೆ ಈಗಿನ ೧೦ನೇ ತರಗತಿ. ಆ ದಿನಗಳಲ್ಲಿ ಇಂದಿನ SSLC ಪರೀಕ್ಷೆ ೧೧ನೆ ತರಗತಿ ಮುಗಿಸಿದ ಮೇಲೆ ಇರುತ್ತಿತ್ತು.

  • ಅವರು ಹಾಯಸ್ಕೂಲಿನ VII ಕ್ಲಾಸಿನಲ್ಲಿದ್ದಾಗ (ಅಂದರೆ ಈಗಿನ SSLC) ಅವರಿಗೆ ಇದ್ದ ಒಂದು ಪಠ್ಯಪುಸ್ತಕ – ರಾಘವಭಟ್ಟನ ಅರ್ಥದ್ಯೋತನಿಕಾ ವ್ಯಾಖ್ಯಾನ ಸಹಿತವಾದ ಕಾಲಿದಾಸನ ಅಭಿಜ್ಞಾನ ಶಾಕುಂತಲವೆಂಬ ಇಂಗ್ಲಿಷ ಟಿಪ್ಪಣಿಗಳ ಸಹಿತವಾದ ಸಂಸ್ಕೃತ ಪುಸ್ತಕ. ಪುಸ್ತಕವನ್ನು ತೆರೆದಾಗ ವಿದ್ಯಾರ್ಥಿ ದೆಸೆಯಲ್ಲಿದ್ದಾಗಿನ ರಂಗನಾಥ ಬರೆದ ತನ್ನ ಹೆಸರು, ಊರು, ತರಗತಿ ಮತ್ತು ಕಲಿಯಲೆಂದು ಬಂದಿದ್ದ ಊರು ಇದನ್ನೆಲ್ಲ ಅವರ ಕೈಬರಹದಲ್ಲಿರುವದು ಕಾಣುತ್ತದೆ. ಅವರ ಸಹಿಯೂ ಇದೆ Mangalwedhekar ಎಂದು. ಅದು, ಅವರು ಇನ್ನೂ R.R.Mangalwedhe ಆಗಿದ್ದ ಕಾಲ. ದತ್ತಕಹೋಗಿ R.K.Mangalwedhe ಆಗಿರಲಿಲ್ಲ.
    ಈ ಪುಸ್ತಕ ಆಗ ಧಾರವಾಡದಲ್ಲಿ ಲಭ್ಯವಿರಲಿಲ್ಲವೆಂದು ಕಾಣುತ್ತದೆ. ಮುಂಬಯಿಯಿಂದ Secondhand Book Seller ಒಬ್ಬರಿಂದ  ೫ರೂ.೧೧ಆಣೆ ಕೊಟ್ಟು VP Bookpost ತರಿಸಿಕೊಂಡಿದ್ದರು. ಅದಕ್ಕಾಗಿ ಕೊಟ್ಟಿದ್ದ ವಿಳಾಸ : C/O ಆರ್.ಆರ್. ದೇಶಪಾಂಡೆ, ಸಾಧನಕೇರಿ. ಬಹುಶಃ ಅವರಲ್ಲಿನ ಒಂದು ಕೋಣೆಯಲ್ಲಿ ಇರುತ್ತಿದ್ದರೇನೋ! ಇನ್ನು ಆ ಕಾಲದ ಆ ಪಠ್ಯಪುಸ್ತಕವನ್ನು ನೋಡಿದರೆ ಈಗಿನ ಕಾಲೇಜು ವಿದ್ಯಾರ್ಥಿಗಳ ಮಟ್ಟಕ್ಕೂ ಭಾರವೆನಿಸುತ್ತದೆ.

  • ದತ್ತಕ ಪತ್ರ – ವಾವೆಯಲ್ಲಿ ಕಕ್ಕಿಆಗಿದ್ದ ಮುರಗೋಡ ಸೀತಕ್ಕ (ಕಿತ್ತೂರಿನಲ್ಲಿದ್ದ ಮುರಗೋಡ / ಮಂಗಳವೇಢೆ ಕೃಷ್ಟಾಚಾರ್ಯರ ಪತ್ನಿ) ತನ್ನ ಪತಿ ೬-೧೧-೧೯೪೦ರಲ್ಲಿ ಮರಣ ಹೊಂದಿದ ಎರಡು ತಿಂಗಳ ನಂತರ ರಾಮಾಚಾರ್ಯರ ಪುತ್ರ ರಂಗನಾಥ ಅವರನ್ನು ೭-೧-೧೯೪೧ರಂದು ದತ್ತಕ ತೆಗೆದುಕೊಂಡು, ಬೆಳಗಾವಿಯ ಸಬ್ ರಜಿಸ್ಟ್ರಾರರಲ್ಲಿ ನೋಂದಣಿ  ಮಾಡಿಕೊಟ್ಟ ದತ್ತಕ ಪತ್ರ.

  • ಸೆಕೆಂಡರಿ ಟೀಚರ್ಸ ಸರ್ಟಿಫಿಕೇಟನ್ನು – ೧೯೩೦ ರಲ್ಲಿ ಮೆಥೋಡಿಸ್ಟ ಚರ್ಚದವರು ನಡೆಸುತ್ತಿದ್ದ ವನಿತಾ ವಿದ್ಯಾಲಯ ಹೆಣ್ಣುಮಕ್ಕಳ ಮಾಧ್ಯಮಿಕ ಶಾಲೆಯಲ್ಲಿ ರಂಗನಾಥ ಅವರಿಗೆ ಶಿಕ್ಷಕನೆಂದು ೧-೯-೧೯೩೦ ರಂದು ಕೆಲಸವಾದ ನಂತರ ೧೯೩೮ ರ ಜೂನದಲ್ಲಿ ಅವರು ಸೆಕೆಂಡರಿ ಟೀಚರ್ಸ ಸರ್ಟಿಫಿಕೇಟನ್ನು ಪಡೆದರು. ಆಗ ಕೆಲ ಕಾಲತಮ್ಮ ಅಡ್ಡಹೆಸರನ್ನು ಮಂಗಳವೇಢೆಕರ ಎಂದೂ ಅವರು ಬರೆದುಕೊಳ್ಳುತ್ತಿದ್ದರು. ಈ ಸರ್ಟಿಫಿಕೇಟಿನಲ್ಲಿಯೂ ಹಾಗೆಯೆ ಇದೆ.

 

 

  • ವನಿತಾ ವಿದ್ಯಾಲಯದ ಶಿಕ್ಷಕವೃಂದ

ಬಹುಶಃ ಜೂನ ೧೯೫೦ರಲ್ಲಿ, ಆ ಶಾಲೆಯ ರಜತ ಮಹೋತ್ಸವ ವರ್ಷದಲ್ಲಿ, ತೆಗೆದುದು. ಸಧ್ಯ ರಂಗನಾಥ ಅವರ ಎರಡೆ ಫೋಟೊಗಳು ಮಾತ್ರ ಲಭ್ಯ ಇವೆ. ಒಂದನೆಯದು ಈ ಗ್ರುಪ್ ಫೋಟೊ, ಎರಡನೆಯದು ೧೯೫೩ ರಲ್ಲಿ ಬದರೀ ಯಾತ್ರೆಗೆ ಹೋದಾಗ ಬದರೀನಾರಾಯಣನ ಗುಡಿಯ ಹೊರಗೆ ತೆಗೆಸಿಕೊಂಡ ಫೋಟೊ. ಕೆಲಸ ಸಿಕ್ಕ ಹೊಸತಾಗಿ ತೆಗೆದಿದ್ದ ಶಾಲಾ ಸ್ಟಾಫ ಫೋಟೊ ಒಂದು ಇದ್ದಿತಾದರೂ ಅದೀಗ ಉಳಿದಿಲ್ಲ. ಕೆಳಗಿನ ಈ ಫೋಟೊದಲ್ಲಿ ಕುಳಿತವರಲ್ಲಿ ಎಡಗಡೆಯಿಂದ ಆರನೆಯವರು ಶಾಲೆಯ ಪ್ರಿನ್ಸಿಪಾಲರಾದ ಮಿಸ್.ಜಾನಸನ್ ಅವರು. ಅಮೇರಿಕೆಯ ಹೆಣ್ಣುಮಗಳು. ಆಕೆಯೆ ಹಾಗೆ ವಿದೇಶದಿಂದ ಬಂದ ಆ ಶಾಲೆಯ ಕೊನೆಯ ಪ್ರಿನ್ಸಿಪಾಲ.

ಕುಳಿತವರು (ಎಡದಿಂದ ಬಲಕ್ಕೆ) : ೧) E.C. ರೆಡ್ಡಿ ೨) ನೀಲಜಗಿ ೩) ಮಿಸೆಸ್. ಥಿಟೆ (ಇನಸ್ಪೆಕ್ಟರ) ) ೪) ಅಫೆನ್ಸೊ (RPD ಕಾಲೇಜಿನ ಪ್ರಿನ್ಸಿಪಾಲರು) ೫) ?  ೬) ಮಿಸ್. ಜಾನ್ಸನ (ಪ್ರಿನ್ಸಿಪಾಲ) ೭) ಮಿಸೆಸ್. ಅಫೆನ್ಸೊ ೮) ಸೀಮನ್ಡ್ಸ್ ೯) ಮಿಸೆಸ್. ಸ್ಟ್ರೊಮ್
ನಡುವಿನ ಸಾಲು (ಎಡದಿಂದ ಬಲಕ್ಕೆ) : ೧) ಮಿಸೆಸ್. ಪ್ರಭಾಕರ (ಮೋಸೆಸ) ೨) ಮಿಸೆಸ. ಹೀರಾ ಧನವಡೆ ೩) ಮಿಸೆಸ್. ಮ್ಯಾಥ್ಯೂ  ೪) ಮಿಸೆಸ್. ಸೋನ್ಸ  ೫) ಮಿಸೆಸ್. ಗೋರಡೆ  ೬) ಮಿಸೆಸ್. ಕಲಪತ್ರಿ  ೭) ಮಿಸೆಸ್. ನೀಲಜಗಿ ೮) ಮಿಸೆಸ್. ಮೆಕ್ಯಾಡೆನ್  ೯) ಮಿಸೆಸ್. ಸ್ಯಾಮ್ಯುಯೆಲ್  ೧೦) ಹೆಸರು ಗೊತ್ತಿಲ್ಲ. ಒಬ್ಬ ಅಮೇರಿಕನ್.
ಹಿಂದಿನ ಸಾಲು (ಎಡದಿಂದ ಬಲಕ್ಕೆ) : ೧) ಎನ್.ಆರ್. ಸಖದೇವ (ಮರಾಠಿ ಮತ್ತು ಗಣಿತ ಶಿಕ್ಷಕ):  ೨) ಗಂಭೀರ (ಹಿಂದಿ ಶಿಕ್ಷಕ)  ೩) ಜಿ.ಎನ್. ಕುಲಕರ್ಣಿ (ಮರಾಠಿ ಶಿಕ್ಷಕ)  ೪) ವಿ.ಎನ್.ತಗಾರೆ  ೫) ವಿ.ವಿ. ಉತ್ತೂರಕರ (ಸಂಗೀತ ಶಿಕ್ಷಕ)  ೬) ಆರ್.ಕೆ.ಮಂಗಳವೇಢೆಕರ (ಗಣಿತ, ಕನ್ನಡ, ಸಂಸ್ಕೃತ ಶಿಕ್ಷಕ) ೭) ಎಸ್.ಎಸ್. ಗಳತಗೆಕರ  (ಇತಿಹಾಸ ಶಿಕ್ಷಕ) ೮) ಜಿ.ಎಮ್.ಮೆಕ್ಯಾಡೆನ್ (ಇಂಗ್ಲಿಷ ಶಿಕ್ಷಕ- ಮರಾಠಿ ಮತ್ತು ಕನ್ನಡ ಎರಡೂ ವಿಭಾಗ).

ಇವರಲ್ಲಿ ಪ್ರಿನ್ಸಿಪಾಲರಾದ ಮಿಸ್.ಜಾನ್ಸನ್ ಅಮೇರಿಕೆಯ ಹೆಣ್ಣು ಮಗಳಾಗಿದ್ದರೂ ಕನ್ನಡವನ್ನೂ ಮಾತನಾಡಬಲ್ಲವರಾಗಿದ್ದರು. ಇ.ಸಿ.ರೆಡ್ಡಿ ಪಕ್ಕದಲ್ಲಿಯೆ ಇದ್ದ ಬೆನನ್-ಸ್ಮಿಥ ಗಂಡುಮಕ್ಕಳ ಮಾಧ್ಯಮಿಕ  ಶಾಲೆಯ ಪ್ರಿನ್ಸಿಪಾಲರು. ಸಂಗೀತ ಶಿಕ್ಷಕರಾಗಿದ್ದ ವಿನಾಯಕಬುವಾ ಉತ್ತೂರಕರ (೧೯೧೪-೧೯೮೯) ಅವರು ಗ್ವಾಲಿಯರ ಘರಾಣಾ ಶೈಲಿಯ ಖ್ಯಾತ ಪಂಡಿತರು. ತಂದೆ ಅದೇ ಘರಾಣಾದ ಪಂಡಿತರಾದ ವಿಷ್ಣು ಕೇಶವ ಉತ್ತೂರಕರ ಜೋಶಿ ಮಿರಜದಲ್ಲಿದ್ದರು. ವಿನಾಯಕಬುವಾ ಉತ್ತೂರಕರ ಅವರು ಅಕಾಶವಾಣಿ ಧಾರವಾಡ ಕೇಂದ್ರದ ಎ ಗ್ರೇಡ ಕಲಾವಿದರಾಗಿದ್ದರು ಅಲ್ಲದೆ ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿಯ ಪ್ರಶಸ್ತಿ (೧೯೭೯) ಪಡೆದವರು.

  • ರಂಗನಾಥ ಅವರ ಹಿರಿಯ ಮಗ ಶ್ರೀನಿವಾಸ ತೀರಿಕೊಂಡಾಗ ವನಿತಾ ವಿದ್ಯಾಲಯ ಶಾಲೆಯು ಕಳುಹಿಸಿದ ದುಃಖಸೂಚಕ ಪತ್ರ (೮-೦-೧೯೫೫)

  •  ಮರಣದ ಸಮರ್ಥನೆ ಪತ್ರ – Certificate of Death