ಭೀಮಾಚಾರ್ಯ ರಂಗಾಚಾರ್ಯ ಮಂಗಳವೇಢೆ (ಜ. ೧೮೫೦ರ ಆಸುಪಾಸಿನಲ್ಲಿ. ಮ. ೧೯೦೫ ಆಸುಪಾಸಿನಲ್ಲಿ) ಇವರ ಕಾಲದ ಕಾಗದ ಪತ್ರಗಳು

ದಾನಪತ್ರ

ಕಿತ್ತೂರಿನ ಗುರುವಾರ ಪೇಟೆಯಲ್ಲಿನ ಗದ್ದಿ ಓಣಿಯ ಆ ಮನೆ ನನ್ನ ಮುತ್ತಜ್ಜ ಭೀಮಸೇನಾಚಾರ್ಯರಿಗೆ ದಾನವಾಗಿ ಬಂದದ್ದು ೧೮೬೪ನೆ ಇಸ್ವಿಯಲ್ಲಿ.

ಅದಕ್ಕೆ ಸಂಬಂಧಿಸಿದ   ಆ ದಾನಪತ್ರ

ಭೂದಾನ ಪತ್ರ

ಶ್ರೀ ಲಕ್ಷ್ಮೀ ವೆಂಕಟೇಶ ಪ್ರ

(ಶ್ಲೋಕ)

ಸ್ವಸ್ತಿ ಶ್ರೀ ಜಯಾಭ್ಯುದಯ ನೃಪಶಾಲಿವಾಹನ ಶಕೆ ೧೭೮೫ನೆ ವಾರುದಿರೋದ್ಗಾರಿ ಸಂವತ್ಸರ ಫಾಲ್ಗುಣ ಶುದ್ಧ ಪಂಚಮಿಯಲ್ಲಿ ಆಶ್ವಿಲಾಯನ ಸೂತ್ರದ ಋಕ್ಶಾಖೀಯ ಕಾಸ್ಯಪ  ಗೋತ್ರೋತ್ಪನ್ನ ಅನಂತಾಚಾರ್ಯ ಪ್ರಪೌತ್ರ ಕೃಷ್ಣಾಚಾರ್ಯರ ಪೌತ್ರ ರಂಗಾಚಾರ್ಯರ ಪುತ್ರ ಚಿರಂಜೀವ ಭೀಮಶೈನಾಚಾರ್ಯ ಮಂಗಳವೇಡಿ ವಾಸ್ತವ್ಯ ಮುರಗೋಡ ಇವರಿಗೆ– ಆಶ್ವಿಲಾಯನ  ಸೂತ್ರದ ಋಕ್ಶಾಖೀಯ ಭಾರದ್ವಾಜ ಗೋತ್ರೋತ್ಪನ್ನ ನರಸಿಂಹಭಟ್ಟರ ಪೌತ್ರ ಗುಂಡಭಟ್ಟರ ಪುತ್ರ ಕೃಷ್ಣಭಟ್ಟರ ಪತ್ನಿ ಸಾವಿತ್ರಿಬಾಯಿಯು ಸೌಭಾಗ್ಯವತಿ ತುಲಸಾಬಾಯಿ ಕನ್ಯಾದಾನ ಕಾಲದಲ್ಲಿ ಸಂಕಲ್ಪ(ದ) ಭೂದಾನ ಗೃಹದಾನ ಪತ್ರ ಬರಕೊಟ್ಟ ಕ್ರಮವೇನೆಂದರೆ ನಾನು ನಮ್ಮ ಪಿತೃಗಳಿಗೆ ಅಕ್ಶಯಲೋಕವಾಸ್ಯರ್ಥ ಕಿತ್ತೂರಲ್ಲಿರುವ ಜೋಯಿಸ ನರಸಿಂಹಭಟ್ಟರಹೊನ್ದಿಗೆ ಇದ್ದ ನಮ್ಮನಿ ಪೈಕಿ ಪಶ್ಚಿಮಕ್ಕೆ ಇದ್ದ ಅರ್ಧವನ್ನು ಹಾಂಗೆ ದೇಗಲವಳ್ಳಿ ತಾಲೂಕ ಬೀಡಿ ಈ ಗ್ರಾಮದಲ್ಲಿ ನಮ್ಮ ಇನಾಮ ಭೂಮಿ ನಂ ೯೮ ಯಕರೆ ೫-೩೮ ಆಕಾರ ರೂಪಾಯಿ ೧೯ (ಹತ್ತೊಂಬತ್ತು) ಈ ಭೂಮಿಯನ್ನು ನೀವು ನಿಮ್ಮ ಪುತ್ರಾದಿ ವಂಶಪರಂಪಾನುಭವ ಮಾಡಿಕೊಂಡು ನಮ್ಮ ವಂಶಕ್ಕೆ ಹಿತಚಿಂತನ ಮಾಡುತ ಇಹೋದು ಇದಕ್ಕೆ ದಾರಾದರೂ ನಮ್ಮವರಾಗಲಿ ಪರಕೀಯರಾಗಲಿ ಅನ್ಯಥಾ ಮಾಡಿದರೆ ಕಾಶಿಯಲ್ಲಿ ಗುರುಹಿರೇರ ವಧಾ ಮಾಡಿದರ ದಾವ ದೋಷವೊ ಆ ದೋಷ ಬರಲಿ ಈ ಭೂಮಿಗೆ ಚತುಶ್ಶೀಮಾ ಪೂರ್ವಕ  ನಂ ಪಶ್ಚಿಮಕ್ಕೆ ನಂ ದಕ್ಷಿಣಕ್ಕೆ ನಂಬರ ೯೯ ಉತ್ತರಕ್ಕೆ ನಂ ೯೭ ಈ ಭೂಮಿಯ ನಂಬರಗಳ ಮಧ್ಯದಲ್ಲಿ ಇದ್ದ ಆಭೂಮಿಯಲ್ಲಿ ತರುಪಾಶಾಂಗ ನಿಧಿನಿಕ್ಷೇಪ ಮೊದಲಾದ್ದು ನೀವೇ ಅನುಭವಿಸತಕ್ಕದ್ದು ಹಾಂಗೆ ಅದರ ಚವಥಾಯಿ ವಾರ್ಷಿಕ ನಜರಾಣಿ ನೀವೇ ಕೊಡತಕ್ಕದ್ದು ಯಂದು ಬರಶಿಕೊಟ್ಟ ಗೃಹದಾನಪತ್ರ  ಸಹಿ–

(ಶ್ಲೋಕ)———-

———–

———–

ತಾ ೧೨ನೆ ಮಾರ್ಚ ೧೮೬೪ ಇಸಿವೀ ಇ ಲಿಖಿತಾಕ್ಷರ ರಾಮಚಂದ್ರ ಕೃಷ್ಣ ಶಾನುಭೋಗ ಗಂದಿಗವಾಡ ತಾಲುಕ

ಈ ಗುರುತು ಸಾವಿತ್ರಿಬಾಯಿಯು ಲೇಖನಿ ಹಿಡಿದು ಮಾಡಿದ್ದು

ಈ ಲಿಖಿತಾಕ್ಷರ ರಾಮಚಂದ್ರ ಕೃಷ್ಣ ಶಾನುಭೋಗ  (ಗಂ)-    

 

ಮೇಲೆ  ಬರಕೊಟ್ಟ ಸಾವಿತ್ರಿಬಾಯಿಯು ಭೂದಾನ ಗೃಹದಾನಕೊಟ್ಟದ್ದು ನಮಗೆ ಮಾನ್ಯ ಅದ ರುಜು ನರಸಿಂಹಭಟ್ಟ ಬಿನ್ನ ವೆಂಕಣ್ಣಭಟ್ಟ ಗುಂಡಭಟ್ಟನವರ ದಸ್ತೂರಖುದ್ದ—

                                       ಸಾಕ್ಷಿ

** ಕೃಷ್ಟಾಚಾರ್ಯ ಉಮರ್ಜಿ ಪತ್ರಪ್ರಮಾಣೆ ಸಾಕ್ಷಿ ದಸ್ತೂರಖುದ್ದ *
    ನರಸಿಂಹ್ವಭಟ್ಟ ಜ್ಯೋತಿಷಿ ಕಿತ್ತೂರ ಪತ್ರ ಬರದ ಪ್ರಮಾಣೆ ಸಾಕ್ಷ್ಯ ದಸ್ತೂರಖುದ್ದ
**       ಪೂರ್ಣಾಚಾರ್ಯ ಬಿನ್ನ ಕೃಷ್ಣಾಚಾರ್ಯ ಶಿಗ್ಗಾವಿ ವಾಸ್ತವ್ಯ ಕಿತ್ತೂರ ಸಾಕ್ಷಿ ದಸ್ತೂರಖುದ್ದ
            ಬಾದರಾಯಣ ತಡಕೋಡ ಬರದ ಪತ್ರಕ್ಕ ಸಾಕ್ಷಿ ದಸ್ತೂರಖುದ್ದ

ಇದರ ಹಿಂದಿನ ಮಗ್ಗಲಿಗೆ ಮೇಲೆ 179401ಎಂಬ ಮುದ್ರಿತ ನಂಬರ್

(ಕೆಳಗೆ ಒಂದು ಸಾಲು ಕನ್ನಡದಲ್ಲಿ) ತಾರೀಖು ೧೨ನೆ ಮಾರ್ಚ ಸಂನ್ನ ೧೮೬೪ ಯಿಸ್ವಿಯಲ್ಲಿ…..ಮತ್ತು ನಾಲ್ಕು  ರೂಪಾಯಿ ಬಾಬತ್ತು ಸಾವಿತ್ರಿಬಾಯಿ ಕೊಮ ಕೃಷ್ಣಭಟ್ಟ ಗುಂಡಭಟ್ಟರ ಸಾಕೀನ ಕಿತ್ತೂರು ದಾನಪತ್ರದ ದಶಿಂದ್ಸಾ (ಲ?) ಕೊಟ್ಟದ್ದು ಹಸ್ತೆ ಖುದ್ದು

ಸಹಿ..

ಮೋಡಿಲಿಪಿಯಲ್ಲಿಬರೆದ ೮ ಸಾಲುಗಳು.

Seal of the Deputy Registrar Kittur


ಎರಡು  ಸನದುಗಳು

ಭೂದಾನ ಮಾಡಿಕೊಟ್ಟ ಜಮೀನು ( ದೇಗಲವಳ್ಳಿ ಜಮೀನು ಮತ್ತು ಬಸರಕೋಡ ಜಮೀನು) ತಮ್ಮ (ಕೃಷ್ಣಭಟ್ಟ) ಹೆಸರಿನಲ್ಲಿದ್ದವು ಎಂದು ತೋರಿಸುವ, George Clerk – ಸೀಲು ಇರುವ, ೨ ಜನೇವರಿ ೧೮೬೨ ತಾರೀಖಿನ, ಎರಡು  ಸನದುಗಳು.

 

 

 

 

 

 

 

 

 


ಸಾವಿತ್ರಿಬಾಯಿ (ಕೃಷ್ಣಭಟ್ಟರ ಪತ್ನಿ) ವಂಶಾವಳಿ