ವಾಸುದೇವಾಚಾರ್ಯರಿಗೆ ಮಾಡಿಕೊಟ್ಟ ಮತ್ತೊಂದು ದಾನಪತ್ರ.

ಪೂರ್ತಿ ಮೋಡಿ ಲಿಪಿಯ, ಎರಡು ತುಂಡಾದ ಕಾಗದ.  ಹದಿನಾರೂವರೆ ಸೆಂ.ಮೀ ಅಗಲ, ಇಪ್ಪತ್ತನಾಕು ಸೆಂ.ಮೀ ಉದ್ದದ (ಅಂದರೆ ಆರೂವರೆ ಇಂಚು ಅಗಲ, ಒಂಭತ್ತೂವರೆ ಇಂಚು ಉದ್ದ). ಕೊನೆಯಲ್ಲಿ ಮೋಡಿ ಲಿಪಿ ಅರ್ಥವಾಗದವರಿಗಾಗಿ ಕನ್ನಡದಲ್ಲಿ ದಾನಪತ್ರ ಎಂದು ಬರೆಯಲಾಗಿದೆ. ಅದಕ್ಕೂ ಮೊದಲು ವರ್ತುಲಾಕಾರದ ಮುದ್ರೆಯ ನಕಲೂ ಇದೆ. ದಪ್ಪ, ಉರುಟು – Blotting paper ದಂತಹ ಕೈಯಿಂದ ಮಾಡಿದ ಕಾಗದ. ಶ್ರೀಕಾರ ಬಿಟ್ಟು ೮ + ೮  ಹೀಗೆ ಒಟ್ಟು ೧೬ ಸಾಲುಗಳು.

ಮಾಧವರಾವ ಬೆಳವಿಯವರು ಇದನ್ನೂ ಪೂರ್ಣವಾಗಿ ಓದಲಿಲ್ಲ. ಆದರೆ ಕಾಗದವನ್ನು ಬರೆದು ಕೊಟ್ಟವರು ಸದಾಶಿವರಾವ ನಾಯಿಕ ಸರಲಷ್ಕರ (?) ನಿಂಬಾಳಕರ — ಛತ್ರಪತಿಗೆ ಕಲ್ಯಾಣ ಚಿಂತೂನ — ಶ್ರೀಮಂತ ಶಹಾಜಿರಾವ ಛತ್ರಪತಿಸ್ವಾಮಿ ಎಂಬ ಶಬ್ದಗಳಿವೆ. ಹೀಗೆ ತುಂಡು ತುಂಡಾಗಿ ಅದರಲ್ಲಿನ ಮಜಕೂರನ್ನು ಹೇಳಿದ್ದರು. ವರ್ಷ (?)