ಪಂ.ವಾಮನಾಚಾರ್ಯ ಜೋಶಿ

ಇತ್ತೀಚೆಗೆ ಅಷ್ಟೆ – ನವೆಂಬರ ೬ ರಂದು – ಮಹಾರಾಷ್ಟ್ರ ದ ಲಾತೂರಿನ ಒಬ್ಬ ನಿಷ್ಠಾವಂತ ಮಾಧ್ವ ಬ್ರಾಹ್ಮಣ, ದಾಸ ಸಾಹಿತ್ಯ ಪ್ರೇಮಿ, ಸಂಗೀತದ ಸಂಸ್ಕಾರ ಹೊಂದಿದ್ದ ಒಳ್ಳೆಯ ಕಂಠತ್ರಾಣದ ವ್ಯಕ್ತಿಯೊಬ್ಬರ ಬಗ್ಗೆ ಗೊತ್ತಾಗಿದ್ದಿತು.

ಅದುವೆ ಪಂ.ವಾಮನಾಚಾರ್ಯ ಜೋಶಿಯವರ ಕುರಿತಾದ ವಿಷಯ.

ಗೊತ್ತಾದದ್ದು ಡಾ.ಅನುಪಮಾ ಗುಡಿ ಮಂಗಳವೇಢೆ ಅವರ WhatsAppದ Message ಒಂದರಿಂದ.

ಅದರಲ್ಲಿ ಪಂ.ವಾಮನಾಚಾರ್ಯ ಅವರ ಬಗ್ಗೆ ಒಂದು ವಾಕ್ಯದ ಮಾಹಿತಿಯಷ್ಟೆ ಅಲ್ಲ, ಅವರು ಹಾಡಿದ ಲಕ್ಷ್ಮಿ ಬಾರಮ್ಮಾ ದ ಧ್ವನಿಮುದ್ರಣವೂ ಇದ್ದಿತು.

ತನ್ನ ಮೆಚ್ಚುಗೆಯ ಆ ಪುರಂದರ ದಾಸರ ಕೃತಿಯ ಸೊಬಗನ್ನು, ಆ ಭಕ್ತಿಭಾವನೆಯ ಆ ಆಮಂತ್ರಣದ ನಿವೇದನೆಯನ್ನು ತಾನು ವಾಸಿಸುತ್ತಿದ್ದ ಮಹಾರಾಷ್ಟ್ರ ದ ಜನರಿಗೂ ಗೊತ್ತುಮಾಡಿಕೊಡಬೇಕೆಂದು, ಮರಾಠಿ ಅನುವಾದವನ್ನು ತಾವೇ ಮಾಡಿ ಹಾಡಿದ್ದರು.

ಕೇಳಿದಾಗ ಅದು ಪಂ. ಭೀಮಸೇನ ಜೋಶಿಯವರ ಧ್ವನಿಯೆ ಯೇನೋ ಎಂದು ಆಭಾಸವಾಗುವಂತೆ
ಇದ್ದಿತು. ಇರಲಾರದು ಎಂದು ಯೋಚಿಸಿದರೆ, ಹಾಗಿದ್ದರೆ ಬಹುಶ: ಪಂ.ಮಾಧವ ಗುಡಿಯವರು ಅಂದಿದ್ದಿರಬಹುದು ಎಂದೆನಿಸುವಷ್ಟು ಅವರ ಛಾಪು.

ಅಂತಹ ಭ್ರಮೆ ಹುಟ್ಟಿಸುವ ಧ್ವನಿ ಪಂ.ವಾಮನಾಚಾರ್ಯ ಜೋಶಿ ಅವರದು.

ಈ ವ್ಯಕ್ತಿಯ ಬಗ್ಗೆ ಗೊತ್ತಾಗಿ ಎರಡು ತಿಂಗಳು ಕೂಡ ಆಗಿರಲಿಲ್ಲ. ಉತ್ತರಾದಿ ಮಠದ ಮುಖಪತ್ರಿಕೆ ಶ್ರೀ ಸುಧಾದ ಪುಟಗಳನ್ನು ಮೊನ್ನೆ ಮೊನ್ನೆ ತಿರುವುತ್ತಿದ್ದಾಗ ಆಚಾರ್ಯರು ಇನ್ನಿಲ್ಲವಾದ ಆಘಾತಕರ ಸುದ್ದಿ ಗೊತ್ತಾಯಿತು.

ಉತ್ತರಾದಿಮಠದ ದಿವಾನರು ಬರೆದ obituary  ಕೆಳಗಿದೆ.

WhatsApp Image 2018-01-19 at 18.42.57

ಅವರು ಇಲ್ಲವಾದ ಸುದ್ದಿ ಗೊತ್ತರೂ ಮರಣದ ಕಾಲಕ್ಕೆ ವಯಸ್ಸೆಷ್ಟಾಗಿದ್ದಿತು, ಮರಣದ ಕಾರಣ ಇ. ಗೊತ್ತಾಗದೆ ಉಳಿದವು. ಅವರ ಬಗ್ಗೆ ಮಾಹಿತಿ ಇದ್ದವರು ಅದನ್ನು ದಯವಿಟ್ಟು share ಮಾಡಬೇಕೆಂದು ಕೋರುತ್ತೇನೆ.

ಅವರ ಆ ಭಾಗ್ಯದ ಲಕ್ಷ್ಮಿ ಬಾರಮ್ಮಾ ಧ್ವನಿಮುದ್ರಿಕೆಯನ್ನು ಇಲ್ಲಿ ಕೇಳಿರಿ.

ದೇವರು ವೈ.ವಾ.ವಾಮನಾಚಾರ್ಯರ ಆತ್ಮಕ್ಕೆ ಸದ್ಗತಿಯನ್ನೀಯಲಿ.

ಶ್ರೀಕಾಂತ ಮಂಗಳವೇಢೆ

(ಸಧ್ಯಕ್ಕೆ ಪುಣೆಯಲ್ಲಿ.)

Leave a Reply

Your email address will not be published.