ಬಾಳಾಚಾರ್ಯ


ಬಾಳಾಚಾರ್ಯ
Male View treeಹುಟ್ಟಿದ ದಿನಾಂಕ: 1903-05-05ಮರಣ ದಿನಾಂಕ: 1993-09-31
ತಂದೆ: ಬಂಡಾಚಾರ್ಯತಾಯಿ:
ಮಕ್ಕಳು: ಕಾಂತಾ, ಲಕ್ಷ್ಮೀನರಸಿಂಹ (ಅಣ್ಣಪ್ಪ), ಯಾದವ, ಬಂಡಾಚಾರ್ಯ, ಸೇತೂಬಾಯಿ, ಮಾಯಾವತಿ, ಗೋವರ್ಧನಾಚಾರ್ಯ
ಒಡಹುಟ್ಟಿದವರು: ಪಾಂಡುರಂಗಾಚಾರ್ಯ, ಸ್ವಾಮಿರಾಚಾರ್ಯ / ಕೃಷ್ಟಾಚಾರ್ಯ(?)
Branch: 1Generation: 7

ವ್ಯಕ್ತಿ ಚಿತ್ರ

ದಿ. ಪಂ.ಬಾಳಾಚಾರ್ಯ ಬಂಡಾಚಾರ್ಯ ಮಂಗಳವೇಢೆ

ಯಕ್ಕುಂಡಿಯಲ್ಲಿದ್ದ ಮಧ್ವಾಚಾರ್ಯರ (ಮದ್ದಂಭಟ್ಟರ) ಪ್ರಪೌತ್ರ, ಬಾಳಾಚಾರ್ಯರ ಪೌತ್ರ, ಬಂಡಾಚಾರ್ಯರ ಪುತ್ರ. ಹುಬ್ಬಳ್ಳಿಯಲ್ಲಿ ವಾಸವಾಗಿದ್ದವರು.

ಕಿರು ಪರಿಚಯ
ಒಂದನೆಯ ಟಿಸಿಲಿನ ಏಳನೆಯ ತಲೆಮಾರಿನ ವ್ಯಕ್ತಿ

ಮಾಣಿಕ ಭಟ್ಟ > ಬಾಳಂ ಭಟ್ಟ (ಬಾಳಕೃಷ್ಣ ಭಟ್ಟ ಜೋಶಿ) > ಮಧ್ವಾಚಾರ್ಯ (ಮದ್ದಂ ಭಟ್ಟ) > ಬಾಳಾಚಾರ್ಯ > ಬಂಡಾಚಾರ್ಯ > ಬಾಳಾಚಾರ್ಯ

ಒಂದು ಟಿಪ್ಪಣಿ: ಅಜ್ಜ ಮೊಮ್ಮಗನನ್ನು ದತ್ತಕ ತೆಗೆದುಕೊಂಡಿದ್ದರಿಂದಾಗಿ ಜನಕ ತಂದೆಯ ಹೆಸರು ಬಿಟ್ಟು ಹೋಗಿದೆ. ಅಷ್ಟೆ ಅಲ್ಲ, ಅದರಿಂದಾಗಿ ಒಂದು ತಲೆಮಾರೂ ಕಡಿಮೆಯಾಗಿದೆ, ಹೀಗಾಗಿ ಬಾಳಾಚಾರ್ಯರು ಆರನೆ ತಲೆಮಾರಿನವರಾಗಿದ್ದಾರೆ. ಆದರೆ, ವಾಸ್ತವದಲ್ಲಿ ಅವರು ಏಳನೆಯ ತಲೆಮಾರಿನವರು.
ದತ್ತಕದ ಆ ಪ್ರಸಂಗ- ಮೂರನೆ ತಲೆಮಾರಿನ ಮಧ್ವಾಚಾರ್ಯರ ಪುತ್ರ ಎಂದು ತೋರಿಸಿದ ಬಾಳಾಚಾರ್ಯ, ವಾಸ್ತವದಲ್ಲಿ ದತ್ತಕವಾಗಿ ಬಂದ ಐದನೆ ತಲೆಮಾರಿನ ಮೊಮ್ಮಗ. ನಿಜವಾದ ಒಬ್ಬ ಮಗನೂ ಇದ್ದ. ಆತನ ಹೆಸರೂ ಬಾಳಾಚಾರ್ಯ ಎಂದೇ ಇದ್ದಿತು. ಆದರೆ ಆ ಮಗ ನಿಪುತ್ರಕನಾಗಿಯೆ ಬಹುಶಃ ತೀರಿಹೋಗಿದ್ದರಿಂದ, ಮಧ್ವಾಚಾರ್ಯರ ಸಂತತಿ ನಿಂತು ಹೋಗುವ ಸಂಭವ ಉಂಟಾಯಿತು. ಆಗ ಅವರು ತಮ್ಮ ಅಣ್ಣ ಪಾಂಡುರಂಗಾಚಾರ್ಯರ ಮೊಮ್ಮಗನನ್ನು (ಅಂದರೆ ಕಾಂತಾಚಾರ್ಯರ ಎರಡನೆ ಮಗ. ಈತನ ಹೆಸರೂ ಬಾಳಾಚಾರ್ಯ) ದತ್ತಕ ಪುತ್ರನಾಗಿ ತೆಗೆದುಕೊಂಡಿದ್ದರಿಂದ, ಅವರ ಜನಕ ತಂದೆ ನಾಕನೆ ತಲೆಮಾರಿನ ಕಾಂತಾಚಾರ್ಯರ ಹೆಸರೆ ಬಿಟ್ಟು ಹೋಗಿ ಈ ಭ್ರಮೆ ಉಂಟಾಗಿದೆ.

ಜನ್ಮ ದಿನಾಂಕ: ೫ ಮೇ ೧೯೦೩
ಮರಣ: ೩೧ ಸಪ್ಟೆಂಬರ ೧೯೯೩
ಸಂಸ್ಕೃತ ಪಂಡಿತರು, ವೇದಾಂತ, ಉಪನಿಷತ್, ನ್ಯಾಯಸುಧಾ ಇತ್ಯಾದಿಗಳ ಅಭ್ಯಾಸ ಮಾಡಿದವರು.
ಮೊದಲ ಪತ್ನಿ: ತುಳಸಾಬಾಯಿ. ಇವರ ನಿಧನಾ ನಂತರ ಮತ್ತೆ ಮದುವೆ. ಎರಡನೆ ಪತ್ನಿ: ಶಾಂತಾಬಾಯಿ ಮಕ್ಕಳು: ಮೂರು ಹೆಣ್ಣು ಮತ್ತು ನಾಲ್ಕು ಗಂಡು, ಹೀಗೆ ಒಟ್ಟು ಏಳು ಮಕ್ಕಳು. ತುಳಸಾಬಾಯಿಯ ಹೊಟ್ಟೆಯಿಂದ – ೧. ಕಾಂತಾ ೨. ಲಕ್ಷ್ಮೀನರಸಿಂಹ ೩. ಯಾದವ ೪. ಬಂಡಾಚಾರ್ಯ ಶಾಂತಾಬಾಯಿಯ ಹೊಟ್ಟೆಯಿಂದ – ೧. ಸೇತೂಬಾಯಿ ೨. ಮಾಯಾವತಿ ೩. ಗೋವರ್ಧನ.
ವಾಸವಾಗಿದ್ದುದು – ೪೭೪೭, ತೊರವಿಗಲ್ಲಿ (ರಾಯರ ಮಠದ ಹತ್ತಿರ), ಹುಬ್ಬಳ್ಳಿ